
ಮನುಷ್ಯ ನಾಗರಿಕತೆಗೆ ಬಂದ ಬಳಿಕ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸಲು ಆರಂಭಿಸಿದ. ಇದು ಕಾಲ ಸಾಗಿದಂತೆ ಕ್ರಮೇಣ ಒಂದು ಫ್ಯಾಶನ್ ಆಗಿ ಹೋಯಿತು. ಬಟ್ಟೆಯಲ್ಲಿ ಶ್ರೀಮಂತ ಹಾಗೂ ಬಡವ ಎಂದು ಗುರುತಿಸಲು ಆರಂಭಿಸಲಾಯಿತು.
ಅದರಲ್ಲೂ ಮಹಿಳೆಯರಲ್ಲಿ ದಿನಕ್ಕೊಂದು ಫ್ಯಾಶನ್ ನ ಬಟ್ಟೆಬರೆಗಳನ್ನು ಧರಿಸಲು ಆರಂಭಿಸಿದರು. ತಮಗೆ ಇಷ್ಟವಾಗಿರುವಂತಹ ವಿವಿಧ ರೀತಿಯ ಬಟ್ಟೆಗಳನ್ನು ಧರಿಸಿಕೊಳ್ಳುವರು. ಆದರೆ ಪ್ರತಿಯೊಬ್ಬರಿಗೂ ಒಂದೇ ರೀತಿಯ ಬಟ್ಟೆಗಳು ಹೊಂದಿಕೊಳ್ಳಲ್ಲ.
ಹತ್ತಿ ಬಟ್ಟೆಯು ಕೆಲವರ ದೇಹಕ್ಕೆ ಹೊಂದಿಕೊಂಡರೆ ಸಿಲ್ಕ್ ಮತ್ತು ಇತರ ವಿಧದ ಬಟ್ಟೆಗಳು ಇನ್ನು ಕೆಲವರಿಗೆ ಇಷ್ಟವಾಗುವುದು.
ಆದರೆ ಬಟ್ಟೆಗಳಿಂದಲೂ ಕೆಲವರಲ್ಲಿ ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳೂ ಕಾಣಿಸಿಕೊಳ್ಳುವುದು. ಹೀಗಾಗಿ ಹತ್ತಿ ಬಟ್ಟೆಯು ತುಂಬಾ ಜನಪ್ರಿಯವಾಗಿದೆ. ಹೀಗಾಗಿ ಹತ್ತಿ ಬಟ್ಟೆಯ ಲಾಭಗಳ ಬಗ್ಗೆ ತಿಳಿಯಿರಿ.
ತೇವಾಂಶ ನಿಯಂತ್ರಿಸುವುದು
ಹೆಚ್ಚಾಗಿ ಬೇಸಗೆ ಕಾಲದಲ್ಲಿ ಮೈಯಲ್ಲಿ ಬೆವರು ಅತಿಯಾಗಿ ಬರುವ ಕಾರಣದಿಂದಾಗಿ ಹತ್ತಿ ಬಟ್ಟೆಯು ತುಂಬಾ ಒಳ್ಳೆಯದು. ಇದು ತೇವಾಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ ಮತ್ತು ದ್ರವಾಂಶವನ್ನು ಹೀರಿಕೊಳ್ಳುವುದು. ಹೀಗಾಗಿ ಬಟ್ಟೆಯು ಒದ್ದೆಯಾಗಿರದೆ ಚರ್ಮದ ಮೇಲೆ ಪರಿಣಾಮ ಬೀರದು. ಹತ್ತಿ ಬಟ್ಟೆಯು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುವುದು ಎಂದು ತಜ್ಞರು ಕೂಡ ಹೇಳಿರುವರು.
ಎಲ್ಲಾ ವಾತಾವರಣಕ್ಕೆ
ವಿವಿಧ ರೀತಿಯ ತಾಪಮಾನಕ್ಕೆ ಹೊಂದಿಕೊಳ್ಳುವ ಗುಣ ಹೊಂದಿರುವ ಹತ್ತಿ ಬಟ್ಟೆಯು ಎಲ್ಲಾ ವಾತಾವರಣ ಹಾಗೂ ಋತುಮಣಕ್ಕೆ ಹೊಂದಿಕೊಳ್ಳುವುದು. ಬೇಸಗೆಯಲ್ಲಿ ಸೆಕೆಗೆ ತುಂಬಾ ಒಳ್ಳೆಯದು ಮಾತ್ರವಲ್ಲದೆ, ಚಳಿಗಾಲದಲ್ಲಿ ಚಳಿಯನ್ನು ಕೂಡ ನಿಯಂತ್ರಿಸುವುದು. ಹತ್ತಿಯು ಬಟ್ಟೆಗಳ ನೂಳುಗಳ ನಡುವೆ ಗಾಳಿಯನ್ನು ಹಿಡಿದಿಡುವುದು. ಹತ್ತಿ ಬಟ್ಟೆಯು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ ಮತ್ತು ದೇಹವನ್ನು ಸಾಕಷ್ಟು ನಿರೋಧಿಸುವುದು.

ಹತ್ತಿಯು ನೈಸರ್ಗಿಕವಾಗಿದ್ದು, ಸಿಂಥೆಟಿಕ್ ಬಟ್ಟೆಗೆ ಹೋಲಿಕೆ ಮಾಡಿದರೆ ಇದು ತುಂಬಾ ಕಡಿಮೆ ವಿಷಕಾರಿ. ಸಿಂಥೆಟಿಕ್ ಬಟ್ಟೆಗಳನ್ನು ರಾಸಾಯನಿಕ ಹಾಕಿ ತಯಾರಿಸಲಾಗುತ್ತದೆ. ಹೀಗಾಗಿ ಈ ರಾಸಾಯನಿಕವನ್ನು ಚರ್ಮವು ಹೀರಿಕೊಳ್ಳುವುದು. ಇದು ಕೇವಲ ಚರ್ಮಕ್ಕೆ ಮಾತ್ರವಲ್ಲದೆ, ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ಪಾಲಿಸ್ಟರ್ ಬಟ್ಟೆಗಳಿಗೆ ಟೆರೆಫ್ಥಾಲಿಕ್ ಆಮ್ಲವನ್ನು ಹಾಕಲಾಗುತ್ತದೆ ಮತ್ತು ಅಕ್ರಿಲಿಕ್ ಬಟ್ಟೆಗಳಿಗೆ ಪಾಲಿಯಾಕ್ರಿಲೋನಿಟ್ರಿಲ್, ರಯೊನ್ ಬಟ್ಟೆಗಳಿಗೆ ಸಲ್ಫರಿಕ್ ಆಮ್ಲ ಹಾಗೂ ಅಮೋನಿಯಾ ಹಾಕುವರು. ಅದೇ ನೈಲಾನ್ ಬಟ್ಟೆಗಳಿಗೆ ಪೆಟ್ರೋಲಿಯಂ ಬಳಸಲಾಗುತ್ತದೆ. ಹೀಗಾಗಿ ಹತ್ತಿ ಬಟ್ಟೆ ಸುರಕ್ಷಿತ
ಅಲರ್ಜಿ ರಹಿತ
ಹತ್ತಿ ಬಟ್ಟೆಗಳನ್ನು ಅಲರ್ಜಿ ನಿರೋಧಕವಾಗಿ ರಚಿಸಲಾಗುತ್ತದೆ. ಹತ್ತಿ ಬಟ್ಟೆಗಳಿಂದ ಅಲರ್ಜಿ ಅಥವಾ ಪ್ರತಿಕ್ರಿಯೆ ಉಂಟಾಗುವುದು ತುಂಬಾ ಕಡಿಮೆ. ಚರ್ಮದ ಅಲರ್ಜಿ ತಪ್ಪಿಸಲು ಹೆಚ್ಚಾಗಿ ಹತ್ತಿ ಬಟ್ಟೆ ಧರಿಸಲು ಹೆಚ್ಚಿನ ಚರ್ಮರೋಗ ತಜ್ಞರು ಸಲಹೆ ನೀಡುವರು. ಹತ್ತಿವು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಿಲ್ಲ. ಹೀಗಾಗಿ ವೈದ್ಯಕೀಯ ವಲಯದಲ್ಲಿ ಕೂಡ ಹತ್ತಿ ಬಳಸಲಾಗುತ್ತದೆ. ಮಗುವಿಗೆ ಹೆಚ್ಚಾಗಿ ಹತ್ತಿ ಬಟ್ಟೆಗಳನ್ನು ರಚಿಸಲಾಗುತ್ತದೆ. ಯಾಕೆಂದರೆ ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು.ಬಾಳಿಕೆ
ಹತ್ತಿ ಬಟ್ಟೆಯು ಹೆಚ್ಚು ಬಾಳಿಕೆ ಬರುವ ಬಟ್ಟೆಯೆಂದು ಪರಿಗಣಿಸಲಾಗಿದೆ. ಇದು ಅಷ್ಟು ಸುಲಭದಲ್ಲಿ ಹರಿದು ಹೋಗದು ಮತ್ತು ಯಾವುದೇ ವಾಷಿಂಗ್ ಮೆಶಿನ್ ಗೆ ಇದು ಸಾಟಿಯಾಗುವುದು. ಹತ್ತಿ ಬಟ್ಟೆಯು ಹೆಚ್ಚು ದುರ್ವಾಸನೆ ಉಂಟು ಮಾಡದೆ ಇರುವ ಕಾರಣದಿಂದಾಗಿ ನೀವು ಇದನ್ನು ತುಂಬಾ ಸುಲಭವಾಗಿ ಒಗೆಯಬಹುದು. ಇದನ್ನು ಪೌಡರ್ ಅಥವಾ ಡಿಟರ್ಜೆಂಟ್ ಹಾಕಿ ಬೇಗನೆ ತೊಳೆಯಬಹುದು. ಸಿಂಥೆಟಿಕ್ ಗೆ ಹೋಲಿಕೆ ಮಾಡಿದರೆ ಹತ್ತಿಯು ತುಂಬಾ ಗಟ್ಟಿಯಾಗಿರುವುದು. ಸಿಂಥೆಟಿಕ್ ಬೇಗನೆ ಹರಿದು ಹೋಗುವುದು ಮತ್ತು ಬಿರುಕು ಉಂಟಾಗುವುದು. ಇದು ಹೆಚ್ಚು ಬಾಳಿಕೆ ಬರುವ ಕಾರಣದಿಂದಾಗಿ ಹತ್ತಿ ಬಟ್ಟೆಯನ್ನು ಖರೀದಿ ಮಾಡಬೇಕು.ವಿಷಕಾರಿಯಲ್ಲ