ಕಿಸಾನ್‌ ಸಮ್ಮಾನ್‌ 12ನೇ ಕಂತು ಬಿಡುಗಡೆ : ನಿಮ್ಮ ಹಣ ಖಾತೆಗೆ ಜಮೆ ಆಗಿಲ್ಲದ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡುವುದು ಹೇಗೆ? ಹಣ ಜಮೆ ಆಗದಿದ್ದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.


ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದು. ಇಂದು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 11ನೇ ಕಂತು ಸಿಕ್ಕ ಬಳಿಕ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತುಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಅವರ ಕಾಯುವಿಕೆಗೆ ಈಗ ಫಲ ಸಿಕ್ಕಿದೆ. ನವದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 12 ನೇ ಕಂತನ್ನು ಬಿಡುಗಡೆ ಮಾಡಿದರು. ಮನ್ಸುಖ್ ಮಾಂಡವಿಯಾ, ನರೇಂದ್ರ ಸಿಂಗ್ ತೋಮರ್, ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಮಧ್ಯಸ್ಥಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ 16 ಸಾವಿರ ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದರು. ಹೀಗಿರುವಾಗ ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದು ನಿಮಗೆ ಮುಖ್ಯ? ನಿಮ್ಮ ಸ್ಟೇಟಸ್‌ ಚೆಕ್‌ ಮಾಡುವುದು ಹೇಗೆಂಬ ವಿವರ ಇಲ್ಲಿದೆ

ಈ ವಿಧಾನಗಳಲ್ಲಿ, ನಿಮ್ಮ ಕಂತಿನ ಸ್ಥಿತಿಯನ್ನು ನೀವು ಪರಿಶೀಲಿಸಬಹುದು
12ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿದ್ದರೆ. ಹೀಗಿರುವಾಗ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬ ಸಂದೇಶ ಬರುತ್ತಿತ್ತು. ಈ ಮೂಲಕ ನಿಮ್ಮ ಖಾತೆಗೆ ಕಂತು ಹಣ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂದೇಶದ ಮೂಲಕ ಪರಿಶೀಲಿಸಬಹುದು.
ಎಟಿಎಂ ಮೂಲಕ :ನಿಮ್ಮ ಮೊಬೈಲ್‌ಗೆ ಅಂತಹ ಯಾವುದೇ ಸಂದೇಶ ಬಂದಿಲ್ಲದಿದ್ದರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹತ್ತಿರದ ಎಟಿಎಂಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು. ಕಂತು ಹಣವನ್ನು ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.
ಪಾಸ್ಬುಕ್ ಮೂಲಕ : ನೀವು ಎಟಿಎಂ ಹೊಂದಿಲ್ಲದಿದ್ದರೆ. ಈ ಪರಿಸ್ಥಿತಿಯಲ್ಲಿ, ಖಾತೆಗೆ ಕಂತು ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಪಾಸ್‌ಬುಕ್ ನಮೂದನ್ನು ಸಹ ನೀವು ಪಡೆಯಬಹುದುಹಣ ಜಮೆಯಾಗದಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಖಾತೆಗೆ ಕೃಷಿ ಸಮ್ಮಾನ್‌ ನಿಧಿ ಹಣ ವರ್ಗಾವಣೆ ಆಗಿರದಿದ್ದರೆ, ಸರಕಾರಕ್ಕೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ಲೋಪವಿರಬಹುದು. ಅಥವಾ ನಿಮ್ಮ ಖಾತೆಯಲ್ಲಿ ಸಮಸ್ಯೆ ಇರಬಹುದು ಎಂಬುದನ್ನು ಮೊದಲು ಪರಿಶೀಲಿಸಿ. ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಬರುವುದರೊಳಗೆ ಈ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ನೀವು ಈ ಯೋಜನೆಯ ಲಾಭ ಪಡೆಯಬಹುದು.


ಈ ತಪ್ಪುಗಳಾಗಿವೆಯೇ ಪರಿಶೀಲಿಸಿ:
ಕಿಸಾನ್‌ ಸಮ್ಮಾನ್‌ ನಿಧಿಗೆ ನೋಂದಣಿಯಾಗುವಾಗ ನೋಂದಣಿಯಾಗುವಾಗ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಯಾವುದೇ ಒಂದು ದಾಖಲೆಯ ಕೊರತೆಯಿದ್ದರೆ ಸಮಸ್ಯೆಯಾಗಿರುತ್ತದೆ. ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿಯೂ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇಂತಹ ತಪ್ಪುಗಳಾಗಿದ್ದರೆ, ಕೂಡಲೇ ಸರಿಪಡಿಸಬೇಕು. ನಂತರವಷ್ಟೇ ನೀವು ಮುಂದಿನ ಕಂತನ್ನು ಪಡೆಯಬಹುದು.


ಲೋಪಗಳನ್ನು ಸರಿಪಡಿಸುವುದು ಹೇಗೆ?
ನಿಮ್ಮ ಖಾತೆಗೆ ಕಿಸಾನ್‌ ಸಮ್ಮಾನ್‌ ನಿಧಿಯ 2000 ರೂಪಾಯಿ ಜಮೆಯಾಗಿಲ್ಲದಿದ್ದರೆ, ಚಿಂತೆ ಮಾಡುವ ಬದಲು, ಇಲ್ಲಿ ತಿಳಿಸಿರುವಂತೆ ಮಾಡಿ.
ಡೀಟೇಲ್ಸ್ ನವೀಕರಿಸಿ :
ಪಿಎಂ-ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://pmkisan.gov.in/). ಇಲ್ಲಿ ಫಾರ್ಮರ್ ಕಾರ್ನರ್‌ಗೆ ಹೋಗಿ ಮತ್ತು ಎಡಿಟ್ ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ.ಆಧಾರ್ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. ಕ್ಯಾಪ್ಚಾ ಕೋಡ್ ಕ್ರಿಯೇಟ್‌ ಆಗುತ್ತದೆ. ನಿಗದಿತ ಸ್ಥಳದಲ್ಲಿ ಅದನ್ನು ನಮೂದಿಸಿದ ನಂತರ ಸಲ್ಲಿಸಿ.


ಆನ್‌ಲೈನ್‌ನಲ್ಲಿ ಹೆಸರು ಸರಿಪಡಿಸಿ:
ನಿಮ್ಮ ಹೆಸರು ತಪ್ಪಾಗಿರುವುದರಿಂದಲೂ ಹಣ ಜಮೆಯಾಗಿಲ್ಲದಿರುವ ಸಾಧ್ಯತೆಗಳಿವೆ. ಅಂದರೆ, ವೆಬ್‌ಸೈಟ್‌ನಲ್ಲಿ ನೀವು ನೀಡಿರುವ ಹೆಸರು ಮತ್ತು ಆಧಾರ್‌ನಲ್ಲಿ ನಿಮ್ಮ ಹೆಸರು ವಿಭಿನ್ನವಾಗಿದ್ದರೆ, ಈ ಸಮಸ್ಯೆಯಾಗುತ್ತದೆ. ನಂತರ ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು. ಬೇರೆ ಏನಾದರೂ ತಪ್ಪು ಇದ್ದರೆ, ಅದನ್ನು ನಿಮ್ಮ ಕೃಷಿ ಇಲಾಖೆ ಕಚೇರಿಯಲ್ಲಿ ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.


ಈ ಮೂಲಕವೂ ಸಂಪರ್ಕಿಸಬಹುದು :
ನಿಮ್ಮ ಖಾತೆಗೆ ಹಣ ಜಮೆಯಾಗಿಲ್ಲದಿದ್ದರೆ, ಜಿಲ್ಲಾ ಕೃಷಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಅಲ್ಲಿ ನಿಮಗೆ ಯಾವುದೇ ಮಾಹಿತಿ ಸಿಗದಿದ್ದರೆ, ಕೇಂದ್ರ ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ನೀವು ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅನ್ನು ಸಂಪರ್ಕಿಸಬಹುದು. ಇದಲ್ಲದೆ ನೀವು ಸಚಿವಾಲಯದ ಈ ಸಂಖ್ಯೆಯನ್ನು (011-23381092) ಸಹ ಸಂಪರ್ಕಿಸಬಹುದು.

ಅಧಿಕೃತ ವೆಬ್‌ಸೈಟ್‌ ಸಂಪರ್ಕಿಸಿ :
ಪಿಎಂ-ಕಿಸಾನ್ ಸಮ್ಮನ್ ನಿಧಿ (PM KISAN SAMMAN NIDHI) ಯೋಜನೆ ನಿಧಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು http://www.yojanagyan.in ಕ್ಲಿಕ್ ಮಾಡಿ ನಿಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು

Published by sunil Reddy

you can not live with Agriculture

Design a site like this with WordPress.com
Get started