
೧)ಪ್ರೀಯ ರೈತ ಭಾಂಧವರೇ, ರಾಜ್ಯ ಸರ್ಕಾರವು ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
೨)ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳು ಮೊದಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡಿ, ರಾಜ್ಯದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ.
ಈಗಿನ ಕಾಲದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳದಿಂದ ಹಲವರು ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರಲು ಹಿಂಜರಿಯುತ್ತಿದ್ದಾರೆ. ರೈತರು ಹಿಂದೇಟು ಹಾಕಲು ಮುಖ್ಯ ಕಾರಣವೆಂದರೆ ಸಾಮಾನ್ಯ ವರ್ಗದವರಿಗೆ ಕಡಿಮೆ ಸಹಾಯಧನ ರಾಜ್ಯ ಸರ್ಕಾರವು ನೀಡುತ್ತಿರುವದರಿಂದ ಶೆಡ್ ಅಥವಾ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಹೆಚ್ಚಿನ ಜನ ಮುಂದೆ ಬರುತ್ತಿರಲಿಲ್ಲ.
೩)ಪ್ರಸಕ್ತ ಸಾಲಿನಲ್ಲಿ ಅಂದರೆ 2022ರ ಸಾಲಿನ ಏಪ್ರಿಲ್ 1 ರಿಂದ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೂಲಿ ಕಾರ್ಮಿಕರ ಮೊತ್ತವನ್ನು ರೂಪಾಯಿ 289ರೂ.ನಿಂದ ರೂಪಾಯಿ 309ರೂ.ವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಮಿಕರ ಕೂಲಿ ಮೊತ್ತವನ್ನು ಹೆಚ್ಚಿಸಿ ಕೂಲಿಕಾರರಿಗೆ ಸಿಹಿಸುದ್ದಿ ನೀಡಿದೆ.
ರೈತರು ತಮ್ಮ ಕೃಷಿ ಕೆಲಸದ ಜೊತೆಗೆ ಉಪಕಸುಬಾಗಿ ಜಾನುವಾರು ಸಾಕಣೆ ಮಾಡುತ್ತಾರೆ. ರೈತರು ತಾವು ಸಾಕಿದ ಈ ಜಾನುವಾರಗಳನ್ನು ಹೊರಗಡೆ ಬಯಲಿನಲ್ಲಿ ಕಟ್ಟುವುದರಿಂದ ಹಾಗೂ ಅವುಗಳಿಗೆ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ದನಕರುಗಳು ಕೆಲವೊಮ್ಮೆ ಅನೇಕ ಮತ್ತು ವಿಚಿತ್ರ ಕಾಯಿಲೆಗಳಿಗೆ ತುತ್ತಾಗುತ್ತವೆ. ಇದರ ಜೊತೆಗೆ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಹಲವಾರು ಸಮಸ್ಯೆಗಳನ್ನು ರೈತ ಕುಟುಂಬಗಳು ಎದುರಿಸುತ್ತವೆ.
೪)ನಾವು ಇಂದು ರೈತರಿಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣದ ಬಗ್ಗೆ ಅಂದರೆ ಯಾರ್ಯಾರು ಹಸುಗಳು ಅಥವಾ ಎಮ್ಮೆಗಳನ್ನು ಸಾಕಿದ್ದಾರೋ ಅಥವಾ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆ ಹಿಂದೆ ಇರುವ ಜಾಗದಲ್ಲಿ ಅಥವಾ ಎಲ್ಲಿ ನಿಮಗೆ ಸಂತ ಜಾಗವಿದೆಯೋ ಅಲ್ಲಿ ನೀವು ದನದ ಕೊಟ್ಟಿಗೆ ಅಥವಾ ದನದ ಶೆಡ್ ಅನ್ನು ನಿರ್ಮಾಣ ಮಾಡಲು ಪಂಚಾಯಿತಿ ವತಿಯಿಂದ ರೈತರಿಗೆ ಮತ್ತು ಆಸಕ್ತರಿಗೆ ಸಹಾಯಧನ ನೀಡಲಾಗುತ್ತದೆ.
ಸಾಮಾನ್ಯ ವರ್ಗದ ಜನರಿಗೆ ಸರಿ ಸುಮಾರು ರೂಪಾಯಿ 20,000 ರೂಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ವತಿಯಿಂದ ಅದನ್ನು ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸುಮಾರು 43,000ರೂಗಳ ಸಹಾಯಧನವನ್ನು ಈ ರಾಜ್ಯ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
೫)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪಂಚಾಯಿತಿ ಕಡೆಯಿಂದ ನೀಡುವ ಈ ಒಟ್ಟು ಮೊತ್ತದಲ್ಲಿ ಅಂದರೆ ಈ 43,000ರೂ.ಗಳಲ್ಲಿ, ಫಲಾನುಭವಿ ರೈತರಿಗೆ ಸುಮಾರು 8,996ರೂ.ಗಳನ್ನು ಅವರ ಕೂಲಿ ಮೊತ್ತವಾಗಿ ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
ಈ ಸಹಾಯಧನವನ್ನು ನರೇಗಾ ಕಾರ್ಡ್ ಹೊಂದಿರುವ ರೈತರಿಗೆ ಅಥವಾ ಅರ್ಜಿದಾರರಿಗೆ ಮಾತ್ರ ನೀಡಲಾಗುತ್ತದೆ. ಹಾಗೂ ಅದೇ ರೀತಿಯಾಗಿ ಶೆಡ್ ಅಥವಾ ದನದ ಕೊಟ್ಟಿಗೆ ನಿರ್ಮಾಣ ಮಾಡಲಿಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಉಳಿದ ಮೊತ್ತವನ್ನು ಅಂದರೆ ಉಳಿದ 34,000ರೂ.ಗಳನ್ನು ಪಂಚಾಯಿತಿ ಕಡೆಯಿಂದ ನೀಡಲಾಗುತ್ತಿತ್ತು.
೬)ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಇದರ ಅರ್ಧ ಮೊತ್ತ ಸಿಗುತ್ತಿತ್ತು. ಅಂದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೂಪಾಯಿ 8,996ರೂ.ಗಳ ಕೂಲಿಯನ್ನು ಎಲ್ಲಾ ಸಾಮಾನ್ಯ ವರ್ಗದವರಿಗೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲರಿಗೂ ಸಮಾನವಾದ ಕೂಲಿಯನ್ನು ನೀಡಲಾಗುತ್ತದೆ.
ಆದರೆ ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಸಿಗುವ ಉಳಿದ 34,000ರೂ.ಗಳ ಹಣದಲ್ಲಿ ಸಾಮಾನ್ಯ್ ವರ್ಗದವರಿಗೆ ಅಂದರೆ ಜನರಲ್ ಕೆಟಗರಿ ಅವರಿಗೆ ಈ 34,000ರೂ.ಗಳಲ್ಲಿ ಕೇವಲ ಅರ್ಧ ಮೊತ್ತವನ್ನು ನೀಡಲಾಗುತ್ತಿತ್ತು.
೭) ಅಂದರೆ ಸರಿಸುಮಾರು 20,000ರೂ.ಗಳನ್ನು ಸಾಮಾನ್ಯ ವರ್ಗದವರಿಗೆ ಅಥವಾ ಜನರಲ್ ಕೆಟಗರಿಯವರಿಗೆ ಈ ಯೋಜನೆಯ ಅಡಿಯಲ್ಲಿ ಪಂಚಾಯಿತಿಯ ಕಡೆಯಿಂದ ನೀಡಲಾಗುತ್ತಿತ್ತು. ಹಾಗೂ ಅದೇ ರೀತಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭ್ಯರ್ಥಿಗಳಿಗೆ ರೂಪಾಯಿ 43,000ರೂ.ಗಳ ಸಹಾಯಧನವನ್ನು ಈ ನರೇಗಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ರೈತರು ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ದನದ ಕೊಟ್ಟಿಗೆ ಅಥವಾ ಶೆಡ್ ನ ಅಳತೆ ಎಷ್ಟಿರಬೇಕು?
ದನದ ಶೆಡ್ ಅನ್ನು ನಿರ್ಮಾಣ ಮಾಡಲು ಬೇಕಾಗುವ ಸಾಮಗ್ರಿಗಳು ಏನೇನು?
ಈ ದನದ ಶೆಡ್ಡ್ ಅನ್ನು ಯಾವ ರೀತಿ ಕಟ್ಟಬೇಕು? ಎಂಬುವುದರ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ.
ಈ ದನದ ಕೊಟ್ಟಿಗೆ ನಿರ್ಮಾಣ ಮಾಡಲು ಪಾಲಿಸಬೇಕಾದ ನಿಯಮಗಳು ಏನೆಂದರೆ,
• ರೈತರು ಈ ಯೋಜಯಡಿ ಸಹಾಯಧನವನ್ನು ಪಡೆದುಕೊಳ್ಳಲು ನೀವು ಕಟ್ಟುವ ದನದ ಕೊಟ್ಟಿಗೆ ಅಥವಾ ಶೆಡ್ 5 ಫೀಟ್ ಎತ್ತರದ ಗೋಡೆಯನ್ನು ಹೊಂದಿರಬೇಕು.
• ಹಸುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆಗಾಗಿ ಗೋದಲಿಯನ್ನು ನಿರ್ಮಾಣ ಮಾಡಿರಬೇಕು.
• ಜಾನುವಾರುಗಳಿಗೆ ಶೆಡ್ ನಲ್ಲಿ ಗಾಳಿ ಮತ್ತು ಬೆಳಕು ಆಡಲು ಕೊಟ್ಟಿಗೆಗೆ ಶೆಡ್ ಶೀಟ್ಗಳನ್ನು ಹಾಕಬೇಕು.
•ಇವೆಲ್ಲವುದರ ಜೊತೆಗೆ ನೀವು ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಲು ನರೇಗಾ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕಾಗಿರುತ್ತದೆ.
ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಿಕೊಳ್ಳಲು ರೈತರು ಮೊದಲನೆಯದಾಗಿ ತಮಗೆ ಸಂಬಂಧಪಟ್ಟ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಅಂದರೆ ಈ ಯೋಜನೆಯಡಿಯಲ್ಲಿ ಯಾರ್ಯಾರು ಸಹಾಯ ಧನವನ್ನು ಪಡೆಯಬೇಕೆಂದು ಕೊಂಡಿದ್ದರೋ ಅಥವಾ ಈ ಯೋಜನೆಯ ಫಲಾನುಭವಿಯಾಗಲು ಬಯಸುವಂತಹ ಅರ್ಜಿದಾರರು ತಮ್ಮ ಹೆಸರನ್ನು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಬೇಕಾಗಿರುತ್ತದೆ.
• ಪ್ರತಿವರ್ಷ ಜಾರಿಗೊಳಿಸುವ ಈ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು. ಅಂದಾಗ ಮಾತ್ರ ನೀವು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
• ಇದಾದನಂತರ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳು ಬಂದು ನೀವು ದನದ ಕೊಟ್ಟಿಗೆ ಅಥವಾ ಶೆಡ್ ಕಟ್ಟಬೇಕೆಂದು ಕೊಂಡಿರುವ ಖಾಲಿ ಜಾಗಕ್ಕೆ ಬಂದು ಭೇಟಿ ನೀಡಿ, ಆ ಜಾಗದ GPS ಅನ್ನು ಮಾಡಿ, ಆ ಜಾಗದ ಸರ್ವೆ ಮಾಡಿ ನಿಮಗೆ ದನದ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಅನುಮತಿಯನ್ನು ನೀಡುತ್ತಾರೆ.
• ಅದಾದ ನಂತರ ನೀವು ಕೊಟ್ಟಿಗೆ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ಪಂಚಾಯಿತಿ ನೀಡುವ ಸಹಾಯಧನದಲ್ಲಿ ತಂದು ನಿಮ್ಮ ಕೊಟ್ಟಿಗೆ ಕಟ್ಟುವ ಕೆಲಸವನ್ನು ಪ್ರಾರಂಭಿಸಬಹುದು.
• ನೀವು ಕೊಟ್ಟಿಗೆ ಕಟ್ಟುವ ಕೆಲಸವನ್ನು ಶುರು ಮಾಡುವ ಮೊದಲು ಒಂದು ಕಲ್ಲಿನ ಬೋರ್ಡನ್ನು ಅಂದರೆ ನರೇಗಾ ನಾಮಫಲಕವನ್ನು ಬರೆಸಬೇಕಾಗಿರುತ್ತದೆ.
# ಈ ಬೋರ್ಡ್ ನೀವು ಯಾವ ಯೋಜನೆಯಡಿ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಿ.ಎಂಬುದನ್ನು ಸೂಚಿಸುತ್ತದೆ.
# ಇದರಲ್ಲಿ ನೀವು ಯೋಜನೆ ಪಡೆಯುತ್ತಿರುವ ವರ್ಷ, ಗ್ರಾಮ ಪಂಚಾಯಿತಿ ಹೆಸರು, ತಾಲೂಕು ಮತ್ತು ಜಿಲ್ಲೆಯನ್ನು ಒಳಗೊಂಡಿರುತ್ತದೆ.
# ಈ ನರೇಗಾ ನಾಮಫಲಕಾದಲ್ಲಿ ಫಲಾನುಭವಿಯ ಹೆಸರು ನಮೂದಿಸಲಾಗಿರುತ್ತದೆ.

https://skrushilaw.law.blog/?p=53
ಸಂಪದ ಕೃಷಿ ಗುಂಪಿನಲ್ಲಿ ಸೆರಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ